Amazon

General body of Kodagu District Football Association held on 30 August 2021

 


General body of Kodagu District Football Association was held on 30 August 2021 at Ammathi office with all 20 clubs representatives coming in time & the full committee of the Kodagu District football Association presence


Mr.Sathyanarayan, Secretary KSFA was being given a token of appreciation from our Outgoing President Mr.Nellamakkada Mohan Aiyappa.

Mr.Jagadeesh Mandappa Panthale was Unanimously elected as new President for Kodagu District football Association for the next 2 years.
Group picture of the present Commitee with Mr.Satyanarayan, Secretary KSFA.
 Standing from left - Mr.Jagaish P K, KDFA commitee & Vicepresident of KSFA & Mr.Nagesh P A, Secretary KDFA, Mr.Machaiah P N, Tresurer KDFA, Mr.Lijesh M M, Commitee
Sitting from the left - Mrs.Dechammma, Vice president of KDFA, Mr.Sathyanarayan, Secretary KSFA, Mr. Nellamakkada Mohan Aiyappa, Chief Patron for KDFA, Mr. Jagadeesh Mandappa Panthale, President KDFA.news carried by KodaguMedia

1. https://newsdeskkannada.com/archives/128127 

ಫುಟ್ಬಾಲ್ ‌ಅಸೋಸಿಯೇಷನ್ ಸಭೆ : ಫುಟ್ಬಾಲ್ ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯವಿದೆ : ಕೆಎಸ್ಎಫ್ಎ ಕಾರ್ಯದರ್ಶಿ ಸತ್ಯನಾರಾಯಣ

ಮಡಿಕೇರಿ ಸೆ.1 :  ತಳ ಮಟ್ಟದಿಂದಲೇ ಫುಟ್ಬಾಲ್ ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಛೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಫುಟ್ಬಾಲ್ ‌ಅಸೋಸಿಯೇಷನ್  ಮಹಾಸಭೆಗೆ ವೀಕ್ಷಕರಾಗಿ ಆಗಮಿಸಿ ಸತ್ಯನಾರಾಯಣ  ಮಾತನಾಡಿದರು.
ರಾಜ್ಯ ಫುಟ್ಬಾಲ್ ಸಂಸ್ಥೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಫುಟ್ಬಾಲ್ ಗೆ ಉತ್ತೇಜನ ನೀಡುವ ಕುರಿತು ಸಮಾಲೋಚನೆ ನಡೆಸುತ್ತಿದೆ.
ಜಿಲ್ಲೆಯಲ್ಲಿ ಫುಟ್ಬಾಲ್ ಪಟುಗಳು ಕ್ರೀಡಾ ಪ್ರತಿಭೆ ಮೆರೆದರೆ ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಬೆಳವಣಿಗೆಯಾಗಲು ಸಾಧ್ಯ. ರಾಜ್ಯ ಫುಟ್ಬಾಲ್ ಸಂಸ್ಥೆಯಿಂದ, ಜಿಲ್ಲಾ ಫುಟ್ಬಾಲ್ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ. ಈಗಾಗಲೇ ರಾಜ್ಯ ಸಂಸ್ಥೆಯಲ್ಲಿ ನೋಂದಣಿಯಾದ ಎಲ್ಲಾ ತಂಡಗಳಿಗೆ 20 ಟ್ರ್ಯಾಕ್ ಶೂಟ್ ಕೂಡ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಜನರಲ್ಲಿ ಕ್ರೀಡೆ ಎಂಬುದು ರಕ್ತಗತವಾಗಿ ಬಂದಿದೆ. ಇಲ್ಲಿನ ಜನರು ವಿಶೇಷವಾಗಿ ಕ್ರೀಡೆಗೆ ಹೆಚ್ಚಿನ ಆಸಕ್ತಿ ನೀಡುವವರು. ಜಿಲ್ಲೆಯಲ್ಲಿ ಯುವ ಫುಟ್ಬಾಲ್ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುವ ಕೆಲಸಗಳು ಆಗಬೇಕಾಗಿದೆ. ರಾಜ್ಯ ಸಂಸ್ಥೆಯಿಂದ ಜಿಲ್ಲೆ ಫುಟ್ಬಾಲ್ ಸಂಸ್ಥೆಗಳಲ್ಲಿ ನೋಂದಣಿಯಾದ ತಂಡಗಳಿಗೆ ಎರಡು ದಿನ ವಿಶೇಷ ತರಬೇತಿಯನ್ನು, ನುರಿತ ತರಬೇತುದಾರರಿಂದ,ತರಬೇತಿ ನೀಡುವ ಹೊಸ ಯೋಜನೆ ಸದ್ಯದಲ್ಲೇ ನಡೆಯಲಿದೆ ಎಂದರು.
ಅಲ್ಲದೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ, ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ರವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ರವರು,ಎಲ್ಲರೂ ಒಗ್ಗಟ್ಟನಿಂದ ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ಕೈ ಜೋಡಿಸಬೇಕಾಗಿದೆ.
ನೀವೆಲ್ಲರೂ ಜಿಲ್ಲಾ ಫುಟ್ಬಾಲ್ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಫಲವಾಗಿ ಉತ್ತಮವಾಗಿ ಸಂಸ್ಥೆಯನ್ನು ಕೊಂಡೊಯ್ಯಲು ಸಾಧ್ಯವಾಯಿತು.
ಈಗಾಗಲೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ 20 ತಂಡಗಳು ನೋಂದಣಿಯಾಗಿದೆ. ಜಿಲ್ಲೆಯ ಎಲ್ಲಾ ಫುಟ್ಬಾಲ್ ಪ್ರೇಮಿಗಳು ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ‌. ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ಯಾವ ಕ್ಲಬ್ ಕೂಡ ಅನಧಿಕೃತವಾಗಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಬೇಡಿ.ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ಎರಡು ಸಾವಿರ ರೂ ಪಾವತಿಸಿ ಪಂದ್ಯಾವಳಿಗಳನ್ನು ಆಯೋಜಿಸಿ. ಯಾವುದೇ ಸಮಸ್ಯೆಯಾದರೂ ನಾವು ನಿಮ್ಮ ಕ್ಲಬ್ ನೊಂದಿಗೆ ಇರುತ್ತೇವೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಹೇಳಿದರು.

ಕಳೆದ ಒಂದು ವರ್ಷದ ವಾರ್ಷಿಕ ವರದಿಯನ್ನು ವರದಿ ಮಂಡನೆ ಮಾಡಿ ಮಾತನಾಡಿದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಂಘದ ಅಧ್ಯಕ್ಷರಾದ ಪಿ.ಎ ನಾಗೇಶ್, ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ಮೋಹನ್ ಅಯ್ಯಪ್ಪ ನವರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಎಲ್ಲಾ ಲೀಗ್ ಪಂದ್ಯಾವಳಿಗಳಿಗೆ ದಾನಿಗಳ ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಿ ‌ನಮಗೆ ಧೈರ್ಯ ತುಂಬುತ್ತಿದ್ದರು ಎಂದು,ಜಿಲ್ಲಾ ಫುಟ್ಬಾಲ್ ‌ಸಂಸ್ಥೆಯ ಅಧ್ಯಕ್ಷರ ಕಾರ್ಯ ವೈಖರಿಯ ಬಗ್ಗೆ ಪಿ.ಎ ನಾಗೇಶ್ ರವರು ಮೆಚ್ಚುಗೆ ವ್ಯಕ್ತಪಡಿಸಿದರು.

70 ವರ್ಷ ಮೇಲ್ಪಟ್ಟವರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಯಾವುದೇ ಹುದ್ದೆಗಳನ್ನು ಅಲಂಕರಿಸಬಾರದೆಂಬ ನಿಯಮ ರಾಜ್ಯ ಫುಟ್ಬಾಲ್ ಸಂಸ್ಥೆಯಲ್ಲಿರುವುದರಿಂದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪನವರು ಜಿಲ್ಲಾ ಫುಟ್ಬಾಲ್ ‌ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ನೂತನವಾಗಿ ಪಾಣತ್ತಲೆ ಜಗದೀಶ್ ಮಂದಪ್ಪ ರವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದರು.ಜಗದೀಶ್ ರವರಿಗೆ ,ನಿರ್ಗಮಿತ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.
ಜಿಲ್ಲಾ ಮಹಿಳಾ ತಂಡದ ಅಧ್ಯಕ್ಷರಾಗಿ ಬಿ.ಎ ದೇಚಮ್ಮಾರವನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಹಾಗೂ ನಿರ್ಗಮಿತ ಅಧ್ಯಕ್ಷರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪರವನ್ನು ಜಿಲ್ಲಾ ‌ಫುಟ್ಬಾಲ್ ಸಂಸ್ಥೆಯ ಮಹಾಪೋಷಕರಾಗಿ ಅವಿರೋಧ ಆಯ್ಕೆ ಮಾಡಲಾಯಿತು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾಸಭೆಗೆ ವೀಕ್ಷಕರಾಗಿ ಆಗಮಿಸಿದ,ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣರವರಿಗೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪರವಾಗಿ ಮೋಹನ್ ಅಯ್ಯಪ್ಪನವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಪಿ.ಕೆ ಜಗದೀಶ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಸಿ ದಿನೇಶ್,ಸದಸ್ಯರಾದ ರಕ್ಷಿತ್, ತೀರ್ಪುಗಾರರಾದ ಇಬ್ರಾಹಿಂ,ಧೀರೆಜ್ ರೈ,ಉಸ್ಮಾನ್, ದರ್ಶನ್ ಸುಕುಮಾರ್, ಹಾಗೂ ಎಲ್ಲಾ ಫುಟ್ಬಾಲ್ ಕ್ಲಬ್ ಗಳ ಸದಸ್ಯರು ಹಾಜರಿದ್ದರು.

ವಾರ್ಷಿಕ ಲೆಕ್ಕ ಪತ್ರ ಮಂಡನೆಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಖಜಾಂಚಿ ದೀಪು ಮಾಚಯ್ಯ ಮಂಡಿಸಿದರು.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ತೀರ್ಪುಗಾರ ಸಂಘದ ಅಧ್ಯಕ್ಷ ಪಿ.ಎ ನಾಗೇಶ್ ಸ್ವಾಗತಿಸಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸದಸ್ಯ ಲಿಜೇಶ್ ಅಮ್ಮತ್ತಿ ವಂದಿಸಿದರು.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ಕಾರ್ಯಕ್ರಮವನ್ನು ನಿರೂಪಿಸಿದರು.2. Shakthi NewspaperNo comments:

Post a Comment

3rd September, Revisit and rethinking a must on our Festivial Kailpold?

The people of Kodagu who speak the Kodava language or the Kodagu language are celebrating the festival of Kailpold on 3rd September which in...